ಚಿತ್ರಲೀನ ಬಳ್ಳಿ -
ಅಪೋಸೈನೇಸೀ ಕುಟುಂಬಕ್ಕೆ ಸೇರಿದ ನಿತ್ಯ ಹಸಿರಾಗಿರುವ ಮತ್ತು ದಾರುಮಯ ಬಳ್ಳಿ.  ಅಗ್ಯಾನೋಸ್ಮ  ಸೈಮೋಸ ಇದರ ಶಾಸ್ತ್ರೀಯ ಹೆಸರು.  ಭಾರತದ ಮೂಲವಾಸಿ ಇದು.  ಮಲಯ, ದಕ್ಷಿಣ ಚೀನಗಳಲ್ಲೂ ಕಾಣಸಿಗುತ್ತದೆ.  ಇದರ ಬೇರಿನಿಂದ ತಯಾರಿಸಲಾದ ಕಷಾಯವನ್ನು ಮೂತ್ರಪಿಂಡದ ಕೆಲವು ಬೇನೆಗಳ ನಿವಾರಣೆಗೆ ಬಳಸುತ್ತಾರೆ.  ಜ್ವರ ಬಂದಾಗ ಶಕ್ತಿವರ್ಧಕವಾಗಿ ಉಪಯೋಗಿಸುವುದುಂಟು.
(ಎಸ್.ಐ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ